ದಾಖಲೆಯ ನಿರೀಕ್ಷೆಯತ್ತ ಶಿವಣ್ಣ ಪ್ರಭುದೇವ ರವರ ಕರಟಕ ದಮನಕ:- ಭಟ್ಟರ ಕೈ ರುಚಿಗೆ ಕಾದು ಕುಳಿತ ಪ್ರೇಕ್ಷಕ

ಯೋಗರಾಜ್ ಭಟ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ನಟಿಸಿರುವ ಕರಟಕ ದಮನಕ ಚಿತ್ರವು ಮಾರ್ಚ್ 8ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ.

ಭಾರಿ ನಿರೀಕ್ಷೆ ಹೆಚ್ಚಿಸಿರುವ ಸ್ಟಾರ್ ಕಾಂಬಿನೇಷನ್ :-
ಶಿವಣ್ಣ ಹಾಗೂ ಪ್ರಭುದೇವ ಇದೇ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ಅವರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹೆಚ್ಚಿಸಿದೆ. ಹಲವಾರು ವರ್ಷಗಳಿಂದ ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಕರುನಾಡ ಚಕ್ರವರ್ತಿ ಶಿವಣ್ಣ ಒಂದು ಕಡೆಯಾದರೆ, ಮತ್ತೊಂದೆಡೆ ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಯಾಗಿರುವ ಪ್ರಭುದೇವ. ಇವರಿಬ್ಬರ ನಟನೆ ಹಾಗೂ ನೃತ್ಯವನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಶಿವಣ್ಣಗೆ ನಾಯಕಿಯಾಗಿ ಪ್ರಿಯಾ ಆನಂದ ನಟಿಸಿದ್ದರೆ ಪ್ರಭುದೇವ ಅವರಿಗೆ ನಾಯಕಿಯಾಗಿ ನಿಶ್ವಿಕ ನಾಯ್ಡು ನಟಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಾಲ್ಕು ಹಾಡುಗಳು ರಿಲೀಸ್ ಆಗಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಅದರಲ್ಲೂ ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಹಾಡಿರುವ ‘ಡೀಗ ಡಿಗರಿ’ ಹಾಡಿನಲ್ಲಿ ಶಿವಣ್ಣ ಹಾಗೂ ಪ್ರಭುದೇವ ಅವರ ನೃತ್ಯವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲಾ ಹಾಡುಗಳು ಮಿಲಿಯನ್ಸ್ ಗಟ್ಟಲೆ ವೀವ್ಸ್ ಗಳನ್ನು ಪಡೆದಿವೆ.

ಕಚಗುಳಿ ಇಡುವ ಸಂಭಾಷಣೆಗಳು, ಹಾಸ್ಯ ದೃಶ್ಯಗಳು, ಶಿವಣ್ಣ ಪ್ರಭುದೇವ ರವರ ಕಾಂಬಿನೇಷನ್, ಹಾಸ್ಯದ ರೂಪದಲ್ಲಿ ಯಾವುದೋ ತತ್ವವನ್ನು ಹೇಳ ಹೊರಟಿರುವ ಭಟ್ಟರ ನಿರ್ದೇಶನ, ಇದೆಲ್ಲವುಗಳನ್ನು ಒಳಗೊಂಡ ‘ಕರಟಕ ದಮನಕ’ ಪ್ರೇಕ್ಷಕರನ್ನು ಭರಪೂರ ರಂಜಿಸಲು ಸಿದ್ಧವಾಗಿದೆ. ಅಭಿಮಾನಿಗಳು ಇನ್ನೇನು ಮಾರ್ಚ್ 8 ರಂದು ಚಿತ್ರಮಂದಿರಕ್ಕೆ ಬಂದು ತಮ್ಮ ನೆಚ್ಚಿನ ನಟರನ್ನು ಕಣ್ತುಂಬಿಸಿಕೊಳ್ಳುವುದೊಂದೇ ಬಾಕಿ.

ಚಿತ್ರದಲ್ಲಿ ಶಿವಣ್ಣ, ಪ್ರಭುದೇವ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ರವಿಶಂಕರ್, ಬಿರಾದರ್, ರಾಕ್ಲೈನ್ ವೆಂಕಟೇಶ್, ರಂಗಾಯಣ ರಘು, ದೊಡ್ಡಣ್ಣ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಸಂತೋಷ್ ರೈ ಪಾತಾಜೆರವರ ಛಾಯಾಗ್ರಹಣವಿದೆ, ವಿ ಹರಿಕೃಷ್ಣರವರ ಸಂಗೀತ ನಿರ್ದೇಶನವಿದ್ದು, ಕೆ ಎಂ ಪ್ರಕಾಶ್ ರವರ ಸಂಕಲನವಿದೆ.

ರಾಕ್ ಲೈನ್ ವೆಂಕಟೇಶ್ ರವರ ನಿರ್ಮಾಣದ ಈ ಚಿತ್ರವು ಮಾರ್ಚ್ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸ್ಟಾರ್ ಕಾಂಬಿನೇಷನ್ ನ ಈ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a comment