ಅಡ್ವಾನ್ಸ್ ಬುಕಿಂಗ್ ಅಲ್ಲೂ ತೊಡೆ ತಟ್ಟಿದ ಕಾಟೇರ

ಕಾಟೇರ
ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ತರುಣ್ ಸುದೀರ್, ರಾಕ್​ಲೈನ್ ಕಾಂಬಿನೇಷನ್ ನಲ್ಲಿ ಕಾಟೇರ ಸಿನಿಮಾ ಸಿದ್ಧವಾಗಿದೆ. ಸಲಾರ್, ಡಂಕಿ ಸಿನಿಮಾಗಳ ನಡುವೆ ಕನ್ನಡದ ಕಾಟೇರನ ಸಿನಿಮಾ ಕ್ರೇಜ್ ಕೂಡ ಜೋರಾಗಿದ್ದು, ಅಡ್ವಾನ್ಸ್ ಬುಕಿಂಗ್ ಕೂಡ ಶುರುವಾಗಿದೆ. ಟಿಕೆಟ್ ಬುಕಿಂಗ್ ವಿಚಾರದಲ್ಲಿಯೇ ಈ ಒಂದು ದಾಖಲೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.


ಕೇವಲ ಎರಡೇ ಎರಡು ದಿನಗಳಲ್ಲಿ ಕಾಟೇರ ಅತಿ ದೊಡ್ಡ ದಾಖಲೆ ಮಾಡಿದೆ. 50000 ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಬರೋಬರಿ ಒಂದು ಕೋಟಿ ಕಲೆಕ್ಷನ್ ಮಾಡಿದೆ.ಸಿನಿಮಾ ತಂಡವೇ ಇದನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ ಮಾಸ್ ಚಿತ್ರದ ದೊರೆ ಅಂದರೆ ದರ್ಶನ್ ಹಾಗೆ ಅಭಿಮಾನಿಗಳು, ಕಲೆಕ್ಷನ್,ಪ್ರೊಮೋಷನ್ ಎಲ್ಲದರಲ್ಲೂ ನಂಬರ್ 1 ಅನ್ನೋದು ಮತ್ತೊಮ್ಮೆ ನಿಜವಾಗಿದೆ

ಈ ಹಿಂದೆ 24 ಗಂಟೆಯಲ್ಲಿ 10 ಮಿಲಿಯನ್ ವಿವ್ಸ್ “ಸ್ಯಾನೆ ಪಸಂದಾಗವನೆ”ಸಾಂಗ್ ದಾಖಲೆ ಬರೆದಿತ್ತು. ಇದೀಗ ಟಿಕೆಟ್ ಬುಕಿಂಗ್, ಇನ್ನು ಸಿನಿಮಾ ತೆರೆಗೆ ಬಂದ್ರೆ ಇನ್ನೆಷ್ಟು ಹಳೆ ದಾಖಲೆ ಪುಡಿ ಪುಡಿ ಆಗುತ್ತೋ ಎಂಬ ಅಂದಾಗಿನಲ್ಲಿದೆ ಗಾಂಧಿನಗರ ನಿಜಕ್ಕೂ ಪಾನ್ ಇಂಡಿಯಾ ಚಿತ್ರವಲ್ಲದೆ ಇಷ್ಟೊಂದು ಅಡ್ವಾನ್ಸ್ ಬುಕ್ಕಿಂಗ್ ಆಗಿರೋದು ಕನ್ನಡ ಚಲನಚಿತ್ರ ಅಭಿಮಾನಿಗಳಿಗೆ ಹೆಮ್ಮೆಯೇ ಸರಿ.
ಡಿ ಬಾಸ್ ಫ್ಯಾನ್ಸ್ ಹಬ್ಬ ಮಾಡ್ತಿದ್ದಾರೆ. ಇದರ ನಡುವೆ ಕಾಟೇರ ಹೊಸ ಹೊಸ ದಾಖಲೆ ಮಾಡುತ್ತಿದೆ.ಹೈದ್ರಾಬಾದ್ ಕರ್ನಾಟಕ ಭಾಗದ ಕಾಟೇರ ವಿತರಣಾ ಹಕ್ಕನ್ನು ಗುರು ದೇಶಪಾಂಡೆ ವಹಿಸಿಕೊಂಡಿದ್ದಾರೆ ಬಾಕ್ಸ್ ಆಫೀಸ್ ಕೊಳ್ಳೇ ಹೊಡಿಯೋಕೆ ರೆಡಿ ಆಗಿದ್ದು 29ಕ್ಕೆ ನೆಚ್ಚಿನ ನಟನನ್ನು ಮೆರೆಸಲು ಕಣ್ತುಂಬಿಕೊಳ್ಳಲು ಸಿನಿ ಪ್ರಿಯರು ಕಾಯುತ್ತಿದ್ದರೆ.

1 thought on “ಅಡ್ವಾನ್ಸ್ ಬುಕಿಂಗ್ ಅಲ್ಲೂ ತೊಡೆ ತಟ್ಟಿದ ಕಾಟೇರ”

Leave a comment