ಕ್ಯಾಪ್ಟನ್ ಮಿಲ್ಲರ್ ಸ್ಟಾರ್ಟ್ ಕಿಲ್ಲಿಂಗ್ ರೆಕಾರ್ಡ್ಸ್


ಧನುಷ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಪೊಂಗಲ್ ಗೆ ಫಿಕ್ಸ್. ಫಸ್ಟ್ ಲುಕ್ ಟೀಸರ್ ಮೂಲಕ ಬಹಳ ಸದ್ದುಮಾಡಿದ್ದ ಬಹು ನಿರೀಕ್ಷಿತ ಚಿತ್ರ ಇದಾಗಿದೆ. ಈಗಾಗಲೇ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡಿ ಜೈಲರ್ ನಲ್ಲಿ ನರಸಿಂಹ ಆಗಿ ಎಂಟ್ರಿ ಕೊಟ್ಟಿದ್ದ ಶಿವಣ್ಣ ನ ನಟನೆಗೆ ದೇಶವೇ ಫಿದಾ ಆಗಿತ್ತು.ಆ ಮೂಲಕ ತಮಿಳ್ ಡೈರೆಕ್ಟರ್ಸ್ ಶಿವಣ್ಣನ ಕಾಲ್ ಶೀಟ್ಗೆ ಮುಗಿಬಿದ್ದಿದ್ದಾರೆ.
ಶಿವಣ್ಣನಿಗೆ ಯಾಕೋ ಏನೋ ಧನುಷ್ ಅಂದ್ರೆ ತುಂಬಾ ಇಷ್ಟ ಅಂತ ಕಳೆದ ಜೈಲರ್ ಸ್ಟೇಜ್ ಅಲ್ಲಿ ಪ್ರೇಸ್ ಮೀಟ್ ಅಲ್ಲಿಯೂ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ ಹಾಗೆ ಈಗ ಸ್ಕ್ರೀನ್ ಶೇರ್ ಮಾಡಿ ಇನ್ನಷ್ಟು ತಮ್ಮ ಪ್ರೀತಿ ವ್ಯಕ್ತ ಪಡಿಸಿದ್ದಾರೆ.

ಈಗ ಮತ್ತೊಬ್ಬ ತಮಿಳ್ ಸ್ಟಾರ್ ಧನುಷ್ 49ನೇ ಚಿತ್ರಕ್ಕೆ ಬಹು ನಿರೀಕ್ಷೆ ಇದ್ದು ತಮಿಳ್ನಾಡು ಅಷ್ಟೇ ಅಲ್ಲದೆ ಸಿನಿ ದುನಿಯಾ ಎದುರು ನೋಡುತ್ತಿದೆ. ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.
ಬಿಡುಗಡೆಗೆ ದಿನಾಂಕ 2024, ಜನವರಿ 12ರಂದು ಧನುಷ್-ಶಿವಣ್ಣ ಸಿನಿಮಾ ತೆರೆಗೆ ಬರಲಿದ್ದಾರೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶನವಿದ್ದು. ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ.
ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು. ಜಿ.ವಿ. ಪ್ರಕಾಶ್ ಈ ಸಿನಿಮಾಗೆ ಫೇಮಸ್ ಮ್ಯೂಸಿಶಿಯನ್ ಹಿನ್ನೆಲೆ ಸಂಗೀತ ಹಾಗೂ ಟ್ಯೂನ್‌ಗಳನ್ನು ಕಂಪೋಸ್ ಮಾಡಿದ್ದಾರೆ. ಈಗಾಗಲೇ ‘ವಾ ವಾತಿ’ ಸಾಂಗ್ 125 ದಶಲಕ್ಷ ವಿವ್ಸ್ ಮಾಡಿರುವ ಧನುಷ್ & ಜಿ. ವಿ ಜೋಡಿ ಮತ್ತೆ ಮ್ಯೂಸಿಕ್ ಮ್ಯಾಸಿಕ್ ಮಾಡಲು ಒಂದಾಗಿದ್ದರೆ.ಸೆಂಧಿಲ್ ತ್ಯಾಗರಾಜನ್, ಅರ್ಜುನ್ ತ್ಯಾಗರಾಜನ್ ನಿರ್ಮಾಣಮಾಡಿದ್ದಾರೆ. ನಿರ್ಮಿಸಿರುವ 160 ನಿಮಿಷಗಳಲ್ಲಿಯೂ ಸಿಹಿ ಉಣಬಡಿಸಲು ಪೊಂಗಲ್ ‘ಗೆ ಪ್ಲಾನ್ ಮಾಡಿದ್ದಾರೆ.

ಚಲನಚಿತ್ರವನ್ನು ಜುಲೈ 2022 ರಲ್ಲಿ ಘೋಷಿಸಲಾಯಿತು. . ಅಷ್ಟಕ್ಕೂ ಸಿನೆಮಾ ಸ್ಟೋರಿ ಏನೆಂದು ಕಿಂಚಿತ್ತು ಅಂದಾಜು ಮಾಡಲಾಗದೆ ಅಭಿಮಾನಿಗಳು ಕಾತುರರಾಗಿದ್ದರೆ ಧನುಷ್ ಲುಕ್ ಕೂಡ ಬೇರೆಲ್ಲ ಸಿನೆಮಾಗಳಿಗಿಂತ ವಿಭಿನ್ನವಾಗಿ ಮಾಸ್ ಆಗಿದೆ ಹಾಗೂ ಶಿವಣ್ಣ ಇಂಟ್ರೊಡಕ್ಷನ್ ಟ್ರೈಲೆರ್ನಲ್ಲಿ ಸೂಪರ್ ಆಗಿ ಕಾಣುತ್ತಿದೆ ಚಲನಚಿತ್ರ ನಿರ್ಮಾಪಕರು ಇದನ್ನು 3-ಭಾಗದ ಚಲನಚಿತ್ರವನ್ನಾಗಿ ಮಾಡಲು ಯೋಜಿಸಿದ್ದಾರೆ ಎನ್ನಲಾಗುತ್ತದೆ.2024 ಜನವರಿ 12 ಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಜಗತ್ತಿನ ವಿವಿಧೆಡೆ ತೆರೆ ಕಾಣಲಿದ್ದು, ಇದೇ ಕಾರಣಕ್ಕೆ ಭರ್ಜರಿಯಾಗಿ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಲಾಗಿತ್ತು ಬಹುದಿನದ ಬ್ರೇಕ್ ನಂತರ ಧನುಷ್ ಫ್ಯಾನ್ಸ್ ಕುಶ್ ಆಗಿರೋದಂತು ನಿಜ ಶಿವಣ್ಣನಿಗೂ ತಮಿಳುನಾಡಿನಲ್ಲಿ ತನ್ನದೇ ಆದ ಫ್ಯಾನ್ ಬೇಸ್ ಹುಟ್ಟು ಹಾಕಿದ್ದು ಇವೆಂಟ್ ಅಲ್ಲಿ ಶಿಳ್ಳೆ ಚಪ್ಪಾಳೆ ಕೂಗಾಟ ಮುಗಿಲುಮುಟ್ಟಿತ್ತು ನೆಚ್ಚಿನ ನಟ ರಿಗೆ ಪ್ರೇಕ್ಷಕರ ಜೈಕಾರ ಅದ್ದೂರಿಯಾಗಿತ್ತು.ಸದ್ಯಕ್ಕೆ ಶಿವಣ್ಣ ಹಾಗೂ ಧನುಷ್ ಒನ್ ಸ್ಕ್ರೀನ್ ಸಾಂಗ್ ‘ಕೋರನಾರು’ ರಿಲೀಸ್ ಆಗಿದ್ದು ಪ್ರೀ ಇವೆಂಟ್ ಅಲ್ಲಿಯೂ

ಈ ಕಾರ್ಯಕ್ರಮದಲ್ಲಿ ನಟ ಶಿವಣ್ಣ ಅವರು ಮಿಂಚಿದ್ದಾರೆ. ಹಾಗೇ ಧನುಷ್ ಅವರ ಜೊತೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 4 ದಶಲಕ್ಷ ವಿವ್ಸ್ ನೊಂದಿಗೆ ಸದ್ದು ಮಾಡ್ತಿದೆ. ಇನ್ನೇನಿದ್ರೂ ಮಿಲ್ಲರ್ ಅಬ್ಬರ ಥಿಯೇಟರ್ ಅಲ್ಲಿ ಕಣ್ತುಂಬಿ ಕೊಳ್ಳುವ ಕ್ಷಣಕ್ಕೆ ಎದುರು ನೋಡ್ತಿದೆ ಫಿಲ್ಮಿ ವರ್ಲ್ಡ್.’ಗುಂಟೂರ್ ಕರಂ’ ಎದುರು ಬಿಗ್ ಫೈಟ್ ಗೆ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಹಾಗೂ ಸ್ಯಾಂಡಲ್ವುಡ್ ಚಕ್ರವರ್ತಿ ರೇಡಿಯಾಗಿದ್ದಾರೆ.

Leave a comment