ಸಲಾರ್ – ಸುಂಟರಗಾಳಿಯ ಆರ್ಭಟ ಇಂದಿನಿಂದ ಶುರು

ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಡಿಸೆಂಬರ್ 22 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪ್ರಭಾಸ್ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಕಾತುರದಿಂದ ಕಾಯ್ದು ನಿಂತಿದ್ದಾರೆ ತಮ್ಮನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು.

ಬಹುನಿರೀಕ್ಷಿತ ಸ್ಟಾರ್ ನಿರ್ದೇಶಕರಾದ ಪ್ರಶಾಂತ್ ನೀಲ್ ರವರು ಆಕ್ಷನ್ ಕಟ್ ಹೇಳಿದ್ದಾರೆ ಈ ಹಿಂದೆ ಹಿಟ್ ಸಿನಿಮಾದಲ್ಲಿ ಯಶಸ್ಸನ್ನು ಕಂಡಿದ್ದರು. ಈ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ರನ್ನು ಒಂದು ಹೊಸ ರೀತಿಯಾಗಿ ಪರಿಚಯಿಸಲಿದ್ದಾರೆ ಹಾಗೂ ಪ್ರಭಾಸ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದ್ದಾರೆ.

ಈ ಸಿನಿಮಾದ ಸ್ಟಾರ್ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ರವರು ಮೊದಲ ಬಾರಿಗೆ ತೆಲುಗು ಚಿತ್ರರಂಗದ ಮೊದಲ ತೆಲುಗು ಒರಿಜಿನಲ್ ವರ್ಷನ್ ನಿರ್ಮಾಣ ಮಾಡುತ್ತಿರುವ ಸಿನಿಮಾ.

ಹೊಂಬಾಳೆ ಫಿಲಂಸ್ ಹಾಗೂ ಸ್ಟಾರ್ ನಿರ್ದೇಶಕರಾದ ಪ್ರಶಾಂತ್ ನೀಲ್ ಈ ಹಿಂದೆ ಕೆಜಿಎಫ್ ಸಿನಿಮಾದಿಂದ ಭಾರತ ಚಿತ್ರರಂಗದ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದರು.

ಸಲಾರ್ ಮೂವಿಯಿಂದ ಮತ್ತೆ ಭಾರತ ಚಿತ್ರರಂಗದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದ್ದಾರೆ. ಈ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡೆ ತುಂಬಿದೆ.
ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶೃತಿ ಹಾಸನ್, ಜಗಪತಿ ಬಾಬು, ಬಾಬೀ ಸಿಂಹ, ಹಾಗೂ ದಕ್ಷಿಣ ಭಾರತದ ಬಹುದೊಡ್ಡ ತಾರಾ ಬಳಗವೇ ಇದೆ ಇವರಿಗೆಲ್ಲಾ ಪ್ರಶಾಂತ್ ನೀಲ್ ಸಾರಥಿಯಾಗಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಚರಿತ್ರೆ ಸೃಷ್ಟಿಸಲು ಡಿಸೆಂಬರ್ 22 ತೆರೆಮೇಲೆ ಬರುತ್ತಿದ್ದಾರೆ.

Leave a comment