2021 ರಲ್ಲಿ ಟೆಂಪರರಿ ಶೀರ್ಷಿಕೆ SSMB28 ನೊಂದಿಗೆ ಸ್ಟಾರ್ಟ್ ಅಪ್ ಅದ ಚಿತ್ರ ಗುಂಟೂರು ಕಾರಂ ರಿಲೀಸ್ ಗೆ ಕ್ಷಣ ಗಣನೆ
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ಚಿತ್ರವಾಗಿದ್ದು ಮಹೇಶ್ ಬಾಬು ಮತ್ತೆ ಕಮಾಲ್ ಮಾಡಲು ಅಭಿಮಾನಿಗಳಿಗೆ ಬೇರೆ ರೀತಿಯಲ್ಲಿ ಅಕ್ಷನ್ ಕಾರ ಉಣಬಡಿಸಲು ಬರ್ತಿದ್ದಾರೆ ಇದೆ ಜನವರಿ 12ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದು ಈ ವರ್ಷದ ಪವರ್ ಸ್ಟಾರ್ಟ್ ಗೆ ಮಹೇಶ್ ಬಾಬು ತ್ರಿವಿಕ್ರಮ್ ಕಂಬಿನೇಷನ್ ಅಲ್ಲಿ ಮೂಡಿ ಬಂದಿದೆ. ಅಥಡು2005 ಹಾಗೂ ಐದು ವರ್ಷದ ನಂತರ , ಖಲೇಜ 2010 ಮೂವಿಗಳನ್ನು ಮಾಡುವ ಮೂಲಕ ಈ ಹಿಂದೆ ಹಿಟ್ ಕೊಟ್ಟಿದ್ದು ಮತ್ತೆ ಒಂದಾಗಿ ಸ್ಪೆಷಲ್ ಎಂಟ್ರಿ ಕೊಡೋಕೆ ಈ ಜೋಡಿ ಮುಂದಾಗಿದೆ.
ಸರಕಾರು ವಾರು ಪಾಠ ನಂತರ ಬ್ರೇಕ್ ನಲ್ಲಿದ್ದ ಮಾಸ್ ಪ್ರಿನ್ಸ್ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ಅಲ್ಲಿಯೂ ಸಂಚಲನ ಸೃಷ್ಟಿಸಿ ಸಗರದಾಚೆಗೂ ಸದ್ದು ಮಾಡುತ್ತಿದೆ ‘ಗುಂಟೂರ್ ಕಾರಮ್’
ತ್ರಿವಿಕ್ರಮ್ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಮತ್ತು ಎಸ್. ರಾಧಾ ಕೃಷ್ಣ ನಿರ್ಮಿಸಿದ್ದಾರೆ. ಹರಿಕಾ & ಹಾಸನ್ ಕ್ರಿಯೇಷನ್ಸ್ ಮೂಲಕ ತೆರೆಕಾಣುತ್ತಿದೆ. ಮುಖ್ಯ ಭೂಮಿಕೆಯಲ್ಲಿ ಪ್ರಿನ್ಸ್ ಮಹೇಶ್ ಬಾಬು , ಮೊದಲಿಗೆ ಪೂಜಾ ಹೆಗ್ಡೆ ನಟಿಸಬೇಕಿದ್ದ ಚಿತ್ರಕ್ಕೆ ಕಾರಣಾಂತರಗಳಿಂದ ಕನ್ನಡದ ಕಿಸ್ ನಟಿ ಶ್ರೀಲೀಲಾ ನಟಿಸಿದ್ದಾರೆ, ಮೀನಾಕ್ಷಿ ಚೌಧರಿ , ಜಗಪತಿ ಬಾಬು , ರಮ್ಯಾ ಕೃಷ್ಣ , ಜಯರಾಮ್ , ಪ್ರಕಾಶ್ ರಾಜ್ , ಮತ್ತು ಬ್ರಹ್ಮಾನಂದಂ ಅಂಥಹ ಘಟಾನುಘಟಿಗಳು ನಟಿಸಿದ್ದಾರೆ.
ಎಸ್ .ತಮನ್ ಮಾಸ್ ಸಂಗೀತ ಸಂಯೋಜನೆ ಇದ್ದು ಕೋರಿಯೋಗ್ರಾಫರ್ ಮನೋಜ್ ಪರಮಹಂಸ ISC ಒಬ್ಬ ಭಾರತೀಯ ಸಿನಿಮಾಟೋಗ್ರಾಫರ್ ಆಗಿದ್ದು, ಇವರು ತಮಿಳು , ತೆಲುಗು ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವ ಸಿನಿಮಾದಲ್ಲಿದೆ.
159 ನಿಮಿಷಗಳಿರುವ ಚಿತ್ರಕ್ಕೆ ಸುಮಾರು 200 ಕೋಟಿ ಬಡ್ಜೆಟ್ ಮಾಡಲಾಗಿದ್ದೆ 2024 ಬಹುನಿರೀಕ್ಷಿತ ಚಿತ್ರವಾಗಿದೆ.
ಗುಂಟೂರು ಖಾರಂ’ ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಈಗಷ್ಟೇ ಮಹೇಶ್ ಬಾಬು ಶ್ರೀಲೀಲ ಡ್ಯಾನ್ಸ್ ಗೆ ಅಭಿಮಾನಿಗಳು ದಿಲ್ ಕುಶ್ ಆಗಿದ್ದಾರೆ. ಸಂಕ್ರಾಂತಿ ಸಂಭ್ರಮಕ್ಕೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರೆಸಿ ಅರೆದಿರುವ ಘಾಟು ಖಾರ ಇದು. ಎಲ್ಲ ತಯಾರಿ ಜೋರಾಗಿದ್ದು ಥಿಯೇಟರ್ ಮಹೇಶ್ ಬಾಬು ಕಟ್ ಔಟ್ ನೊಂದಿಗೆ ರೆಡಿಯಾಗಿದೆ. ಎ.ಪಿ ಮತ್ತು ತೆಲಂಗಾಣ ಥಿಯೇಟ್ರಿಕಲ್ ರೈಟ್ಸ್‌ಗೆ ಈ ಸಿನಿಮಾ ಸುಮಾರು 120 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಪ್ರದರ್ಶನಕ್ಕೆ ಎಲ್ಲವೂ ಸಿದ್ಧವಾಗಿದೆ. ಕ್ಯಾಪ್ಟನ್ ಮಿಲ್ಲರ್ ಎದುರು ತೊಡೆ ತಟ್ಟೋಕೆ ಗುಂಟೂರು ಕಾರಂ ಸೈ.