ರಕ್ಷ ರಾಮ್ – ಅವರ ಹುಟ್ಟು ಹಬ್ಬದಂದು ‘ಬರ್ಮ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

‘ ಪುಟ್ಟಗೌರಿ ಮದುವೆ’ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಅಭಿನಯಿಸಲು ಶುರು ಮಾಡಿದ ರಕ್ಷ ರಾಮ್ ಅವರು, ಕರ್ನಾಟಕದ ಜನತೆಗೆ ಪರಿಚಯವಾದರು. ಅದಾದ ನಂತರ ‘ಗಟ್ಟಿಮೇಳ’ ಸೀರಿಯಲ್ ನಲ್ಲಿ ತಮ್ಮ ಅಭಿನಯದ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಅವರು ಚಿರಪರಿಚಿತರಾದರು. ಈ ಯಶಸ್ಸಿನ ಬೆನ್ನಲ್ಲೇ ರಕ್ಷ್ ರಾಮ್ ಅವರು ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ಅವರೇ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ ಆ ಚಿತ್ರಕ್ಕೆ ‘ಬರ್ಮ’ ಎಂಬ ಹೆಸರನ್ನು ಇಟ್ಟಿದ್ದಾರೆ.
ಚೇತನ್ ಕುಮಾರ್ ಅವರು ಈ ಸಿನಿಮಾದ ನಿರ್ದೇಶನವನ್ನು ಮಾಡುತ್ತಿದ್ದಾರೆ. ಈ ಹಿಂದೆ ಇವರು
ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಿಟ್ ಚಿತ್ರಗಳನ್ನು ನೀಡುವ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ಚೇತನ್ ಕುಮಾರ್ ಅವರು ತಮ್ಮ ಸಕ್ಸಸ್ ಸೂತ್ರವಾದ ‘ಬ’ ಅಕ್ಷರದಿಂದ ಬರುವ ‘ಬರ್ಮ’ ಹೆಸರನ್ನೇ ಈ ಸಿನಿಮಾಗೆ ಹೆಸರಿಟ್ಟಿದ್ದಾರೆ. ಬಹಳಷ್ಟು ನಿರೀಕ್ಷೆಗಳನ್ನು ಈ ಸಿನಿಮಾ ಈಗಾಗಲೇ ಹುಟ್ಟಿಸಿದೆ.ಇಂದು ರಕ್ಷ ರಾಮ್ ಅವರ ಹುಟ್ಟು ಹಬ್ಬ ಇರುವುದರಿಂದ ಸಿನಿಮಾ ತಂಡ ರಕ್ತದೋಕುಳಿಯೇ ಇರಬೇಕು ಈ ಸಿನಿಮಾದಲ್ಲಿ ಎಂಬ ಕಲ್ಪನೆ ಉಂಟು ಮಾಡುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಪೋಸ್ಟರ್ನಲ್ಲಿ ರಕ್ಷ್ ರಾಮ್ ಅವರು ಸೂಟ್ ಬಟ್ಟೆಯನ್ನು ಹಾಕಿದ್ದಾರೆ ಆದರೆ ಕೈಯಲ್ಲಿ ಕೊಡಲಿ? ಈ ಸಿನಿಮಾದಲ್ಲಿ ಯಾವ ರೀತಿಯ ಕಥೆ ಇರಬಹುದು , ಎಂಬ ಆಲೋಚನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿದ್ದಾರೆ.

ವಿ.ಹರಿಕೃಷ್ಣ ಅವರು ಹಾಗೂ ಚೇತನ್ ಅವರು ‘ಬರ್ಮ’ ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದಾರೆ. ಇದು ಇವರಿಬ್ಬರ ಮೂರನೇ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ ಸಿನಿಮಾ. ಇವರಿಬ್ಬರ ಕಾಂಬಿನೇಷನ್ನಲ್ಲಿ ಕಳೆದ ಎರಡು ಸಿನಿಮಾಗಳು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಬೆನ್ನಲ್ಲೇ ಈ ಸಿನಿಮಾದ ಹಾಡುಗಳ ನಿರೀಕ್ಷೆಯು ಸಹ ಹೆಚ್ಚಾಗಿದೆ.
ಚೇತನ್ ಕುಮಾರ್ ಅವರು ಬರಹಗಾರರಾಗಿ ಸಿನಿಮಾ ರಂಗಕ್ಕೆ ಪರಿಚಯವಾದರು. ಅವರು ಬರೆದಿರುವಂತಹ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿವೆ.

ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇರುತ್ತದೆ ಎಂದು ಸಿನಿಮಾ ತಂಡ ತಿಳಿಸಿದೆ.