‘ಕೆರೆಬೇಟೆ’ಯಾಡಲಿಕ್ಕೆ ಡಾಲಿ ಬರ್ತಿದ್ದಾರೆ.

ಕಾಂತಾರದಂಥಹ ದಕ್ಷಿಣ ಕರ್ನಾಟಕ ಸೊಗಡಿನ ಕಥೆಯುಳ್ಳ ಸಿನಿಮಾಗಳು ಕೂಡ ತೆರೆಗೆ ಬಂದಿವೆ. ಇದೀಗ ಮಲೆನಾಡ ಭಾಗದ ಅಪ್ಪಟ ಗ್ರಾಮೀಣ ಕಥೆಯೊಂದನ್ನು ತೆರೆಮೇಲೆ ತರುವುದಕ್ಕೆ ನಿರ್ದೇಶಕ ರಾಜ್‌ ಗುರು ಮುಂದಾಗಿದ್ದಾರೆ. ಮಲೆನಾಡ ಭಾಗದಲ್ಲಿ ಒಂದು ಆಚರಣೆ ಆಗಿರುವ ‘ಕೆರೆಬೇಟೆ’ ಕುರಿತು, ಅದೇ ಶೀರ್ಷಿಕೆ ಅಡಿಯಲ್ಲಿ ಸಿನಿಮಾ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ‘ಕೆರೆಬೇಟೆ’ ಎಂದರೆ ಮಲೆನಾಡ ಭಾಗದದಲ್ಲಿ ಮೀನು ಬೇಟೆಯಾಡುವ ಒಂದು ಕಡಲತೀರದ ಆಟ ಇದಾಗಿದೆ. ದೊಡ್ಡ ದೊಡ್ಡ ಕೆರೆಗಳಲ್ಲಿ ಈ ಮೀನು ಬೇಟೆ ನಡೆಯುತ್ತದೆ. ಸೊರಬ ಸುತ್ತಮುತ್ತ ಇದರ ಆಚರಣೆಯನ್ನು ದೊಡ್ಡಮಟ್ಟದಲ್ಲಿ ಮಾಡಲಾಗುತ್ತದೆ. ‘ಕೆರೆಬೇಟೆಯನ್ನೇ ಕಥಾವಸ್ತುವಾಗಿತ್ತುಕೊಂಡು ಸಿನಿಮಾ ಮಾಡಲು ಮಾಡಿದ್ದಾರೆ.

ಗೌರಿ ಶಂಕರ್ ಕನ್ನಡದಲ್ಲಿ ಈಗಾಗಲೇ ‘ಜೋಕಾಲಿ’, ‘ರಾಜಹಂಸ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿಯೂ ಅವರೇ ಹೀರೋ ಆಗಿ ನಟಿಸುತ್ತಿದ್ದರೆ. ಈ ಚಿತ್ರಕ್ಕೆ ಜೈ ಶಂಕರ್ ಪಟೇಲ್ ಹಾಗೂ ನಾಯಕ ಗೌರಿ ಶಂಕರ್ ಜಂಟಿಯಾಗಿ ತಮ್ಮದೇ ಆದ ‘ಜನಮನ ಸಿನಿಮಾ’ ಬ್ಯಾನರ್‌ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ರಾಜ್‌ಗುರು ಅವರು ಕನ್ನಡಲ್ಲಿ ಮೊದಲ ಬಾರಿಗೆ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎ ಆರ್ ಬಾಬು, ಪವನ್‌ ಒಡೆಯರ್ ಮುಂತಾದ ನಿರ್ದೇಶಕರ ಜೊತೆ ಸಹನಿರ್ದೇಶಕನಾಗಿ ಕೆಲಸಮಾಡಿದ್ದು ಮೊದಲಬಾರಿಗೆ ಸ್ವತಃ ಮಲೆನಾಡ ಭಾಗದ ಕಥಾವಸ್ತು ಇಟ್ಟುಕೊಂಡು ಹಿಟ್ ನೀಡಲು ಸಜ್ಜಾಗಿದ್ದಾರೆ. ಗಗನ್ ಬದೇರಿಯಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜ್ ಗುರು ಹಾಗೂ ಗೌರಿಶಂಕರ್‌ ಚಿತ್ರಕಥೆ ಸಿನಿಮಾದಲ್ಲಿದ್ದು, ಕೀರ್ತನ್‌ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್‌ ಅವರ ಸಂಕಲನವಿದೆ. ಡಿಫ‌ರೆಂಟ್‌ ಡ್ಯಾನಿ ಸಾಹಸ ಹಾಗೂ ಕಂಬಿರಾಜು ನೃತ್ಯ ಸಂಯೋಜನೆ ಮಾಡಿದ್ದಾರೆ.

ಕಂಟೆಂಟ್ ಒರಿಎಂಟೆಡ್ ಸಿನಿಮಾದಲ್ಲಿ ಗೌರಿ ಶಂಕರ್ ವಿಭಿನ್ನವಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ ಎಂಬ ಕುತೂಹಲ ಚಿತ್ರದ ಮೊದಲ ಪೋಸ್ಟರ್ ನಲ್ಲಿ ಕಾಣಿಸುತ್ತದೆ. ಶೇ 90% ಶಿವಮೊಗ್ಗ ಜಿಲ್ಲೆಯ ಸಿಗಂದೂರು ಹಾಗೂ ಸೊರಬ ತಾಲ್ಲೂಕಿನ ಸುತ್ತ-ಮುತ್ತ ಶೂಟಿಂಗ್ ಮಾಡಲಾಗಿದೆ. ‘ಕೆರೆ ಬೇಟೆ’ ಚಿತ್ರದ ಮೊದಲ ಮೋಷನ್ ಪೋಸ್ಟರ್ ಅಕ್ಟೋಬರ್ 27 ರಂದು ಬಿಡುಗಡೆಯಾಗಿತ್ತು.ಚಲನಚಿತ್ರವನ್ನು 65 ದಿನದಲ್ಲಿ ಚಿತ್ರೀಕರಿಸಲಾಗಿದೆ ನೀವು ಹೊಸ ಮುಖಗಳು, ಸ್ಥಳೀಯ ಪ್ರತಿಭೆಗಳು ಮತ್ತು ಪರಿಚಿತ ಮುಖಗಳನ್ನು ಸಹ ನೋಡಬಹುದು” ಎಂದು ಚಿತ್ರತಂಡ ತಿಳಿಸಿದೆ.

2024ರ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಆ ಬಗ್ಗೆ ಖಚಿತವಾಗಿ ಚಿತ್ರ ಬಿಡುಗಡೆ ದಿನ ಗೊತ್ತು ಮಾಡಿಲ್ಲ.
ಚಿತ್ರದ ಝಲಕ್ ಅನ್ನು ಟೀಸರ್ ಮಾಡಿ ಕುತೂಹಲಕ್ಕೆ ಮತ್ತಷ್ಟು ಬಲ ಕೊಡುವಂತೆ ರೆಡಿ ಮಾಡಿಕೊಂಡಿದೆ ಚಿತ್ರತಂಡ.

ಡಾಲಿ ಧನಂಜಯ ಹಾಗೂ ದಿನಕರ್ ತೂಗುದೀಪ್ ಅವರು ಟೀಸರ್ ಅನ್ನು ದಿನಾಂಕ 3-1-2024ರಂದು ಬೆಳಿಗ್ಗೆ ಬಿಡುಗಡೆ ಮಾಡಲಿದ್ದಾರೆ.

Leave a comment