‘ಬ್ಯಾಚುಲರ್ ಪಾರ್ಟಿ’ಗೆ ಎಲ್ಲರಿಗೂ ಆಹ್ವಾನ – ರಕ್ಷಿತ್ ಶೆಟ್ಟಿ

‘ಬ್ಯಾಚುಲರ್ ಪಾರ್ಟಿ’ ಟೈಟಲ್ನಲ್ಲಿ ಪಾರ್ಟಿ, ಬಿಡುಗಡೆಯಾಗಿರುವ ಹಾಡಿನಲ್ಲೂ ಪಾರ್ಟಿ, ಟೀಸರ್ನಲ್ಲಿ ಹಾಸ್ಯದ ಕಚಗುಳಿ ತೋರಿಸಿ ನಿರೀಕ್ಷೆ ಹೆಚ್ಚಿಸಿರುವ ‘ಬ್ಯಾಚುಲರ್ ಪಾರ್ಟಿ’ ಟ್ರೈಲರ್ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲ ಹೊತ್ತಿನಲ್ಲಿಯೇ ಲಕ್ಷಗಟ್ಟಲೆ ವ್ಯೂಸ್ ಹೋಗುತ್ತಿರುವುದರಿಂದ, ಸಿನಿಮಾದ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಹಾಸ್ಯದ ರಸದೌತಣವೇ ಇರಬಹುದು ಎಂಬಂತೆ ಟ್ರೈಲರ್ ನಲ್ಲಿಯೇ ಬಹಳಷ್ಟು ಸನ್ನಿವೇಶಗಳನ್ನು ತೋರಿಸಿ ಪ್ರೇಕ್ಷಕನಿಗೆ ಭರವಸೆ ಹುಟ್ಟಿಸಿರುವುದರಿಂದ, ಇದು ಬಹು ನಿರೀಕ್ಷಿತ ಚಿತ್ರವಾಗಿದೆ .ರಿಷಬ್ ಶೆಟ್ಟಿ ಬಿಟ್ಟ ಪಾತ್ರದಲ್ಲಿ ಯೋಗಿ ಮಿಂಚು:

ಮೊದಲಿಗೆ ರಿಷಬ್ ಶೆಟ್ಟಿ ನಟಿಸಬೇಕಿತ್ತು ,ಆದರೆ ಕಾಂತರ ಹಿಟ್ ಬಳಿಕ ಪ್ರಿಕ್ವೆಲ್ ನಲ್ಲಿ ಬ್ಯುಸಿ ಅದ ಕಾರಣ ಪಾತ್ರಕ್ಕೆ ಲೂಸ್ ಮಾದ ಯೋಗಿಯನ್ನು ಸೆಲೆಕ್ಟ್ ಮಾಡಲಾಗಿದೆ .’ಹುಡುಗರು’ ಸಿನಿಮಾದಲ್ಲಿನ ಅವರ ನಟನೆ ಅದ್ಭುತವಾದುದು, ಆ ಸಿನಿಮಾದಲ್ಲಿ ಅವರ ನಟನೆ ನೋಡಿ ರಕ್ಷಿತ್ ಯೋಗಿಯವರನ್ನು ರಿಪ್ಲೇಸ್ ಮಾಡಿದ್ದಾರೆ.

ದಿಗಂತ್, ಯೋಗಿ,ಅಚ್ಯುತ್‌ ಕುಮಾರ್ ಜೋಡಿ ಕೂಡ ಮೋಡಿ ಮಾಡಿದೆ. ಸಿನಿಮಾದಲ್ಲಿ ನಗು ತರಿಸುವ ಹಲವು ಅಂಶಗಳಿವೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಟ್ರೈಲರ್ 8 .5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನಂಬರ್ 1 ಟ್ರೆಂಡಿಂಗ್ ನಲ್ಲಿದೆ.ಪರಂವಾ ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಜಿ.ಎಸ್. ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅಭಿಜಿತ್ ಮಹೇಶ್ ರವರು ಚಿತ್ರಕಥೆ ಬರೆದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ,ಅರವಿಂದ್ ಎಸ್ ಕಶ್ಯಪ್ ಚಿತ್ರಕ್ಕೆ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಅರ್ಜುನ್ ರಾಮು ಹೊಸತನದ ಸಂಗೀತ ಅನುಭವ ನೀಡಿದ್ದಾರೆ.

ಸ್ಟಾರ್ ಕಾಸ್ಟ್:

ದಿಗಂತ್ ಮಂಚಾಲೆ, ಯೋಗಿ, ಅಚ್ಯುತ್ ಕುಮಾರ್, ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ಆಚಾರ ಕಿರ್ಕ್, ಪ್ರಕಾಶ್ ತುಂಬಿನಾಡು, ಪವನ್ ಕುಮಾರ್, ಶೈನ್ ಶೆಟ್ಟಿ, ಶೋಭರಾಜ್, ಸೌಮ್ಯ ಜಗನ್ಮೂರ್ತಿ, ವಿಕಿಪೀಡಿಯಾ, ಮಾತಾ ಗುರುಪ್ರಸಾದ್, ಎನ್ ಸೋಮೇಶ್ವರ, ಶ್ವೇತಾ ಶ್ರೀನಿವಾಸ್, ಸುಧಾ ಬೆಳವಾಡಿ, ಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಇನ್ನು ಹಲವಾರು ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಇದೆ.


ಇದೆ ತಿಂಗಳ 26 ರಂದು ರಾಜ್ಯದಾದ್ಯಂತ ಬಿಡುಗಡೆ ಯಾಗಲಿರುವ ಸಿನಿಮಾ ಟ್ರೈಲರ್ ನೋಡಿ ಪ್ರೇಕ್ಷಕ ಮೆಚ್ಚಿಕೊಂಡಿದ್ದು ಈ ವರ್ಷದ ಮೊದಲ ಕನ್ನಡ ಸೂಪರ್ ಹಿಟ್ ಸಿನಿಮಾ ಎಂದು ಭವಿಷ್ಯ ನುಡಿಯುತ್ತಿದ್ದಾರೆ.

Leave a comment