‘ರಾಕ್ಷಸನು ಹೌದು ರಕ್ಷಕನು ಹೌದು ‘ಭೈರತಿ ರಣಗಲ್ ‘ ಅಧ್ಯಾಯ-1:

ದೊಡ್ಮನೆ ಶಿವಣ್ಣ ಈಗ ಮುಟ್ಟಿದ್ದೆಲ್ಲ ಚಿನ್ನ 5 ವರ್ಷಗಳ ಹಿಂದೆ ಬಂದಿದ್ದ ‘ಮಫ್ತಿ’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.ಇದೀಗ ಅದರ ಸೀಕ್ವೆಲ್ ಮಾಡುವ ಮೂಲಕ ಮತ್ತೆ ಮಾಸ್ ಪ್ಲಾನ್ ರೆಡಿಮಾಡುತ್ತಿದೆ ಟೀಮ್.ಮಾಸ್ ಡೈರೆಕ್ಟರ್ ನರ್ತನ್ ಗೆಲುವಿನ ಸಿನೆಮಾದ ಸೀಕ್ವೆಲ್ ಕಡೆ ಮತ್ತೆ ಮುಖಮಾಡಿದ್ದಾರೆ.‘ಭೈರತಿ ರಣಗಲ್‌’ನಲ್ಲಿ ಶಿವಣ್ಣ ಮುಖ್ಯ ಭೂಮಿಕೆಯಲ್ಲಿ ಮತ್ತಷ್ಟು ಮಾಸ್ ಅಂಡ್ ಏನೇರ್ಜಿಟೆಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ‘ಸಪ್ತಸಾಗರದಾಚೆ ಎಲ್ಲೋ’ ನಟಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ.

ಬಳ್ಳಾರಿಯ ಬಳ್ಳಾರಿಯ ಮೈನ್ಸ್ ಸಮೀಪದಲ್ಲಿಯೇ ಶೂಟಿಂಗ್ ಶುರು ಆಗುತ್ತಿದೆ. ಶಿವರಾಜ್ ಕುಮಾರ್ ಬ್ಯಾನರ್‌ನಲ್ಲಿಯೇ ಈ ಸಿನಿಮಾ ನಿರ್ಮಾಣ ಆಗುತ್ತಿದೆ. 60ಕ್ಕೂ ಹೆಚ್ಚು ದಿನ ಶೂಟಿಂಗ್ ಪ್ಲಾನ್ ಮಾಡಿದೆ ಚಿತ್ರತಂಡ.ಭೈರತಿ ರಣಗಲ್‌’ ಸಿನಿಮಾದಲ್ಲಿ ಖಳ ಪಾತ್ರವನ್ನು ಬಾಲಿವುಡ್ ನಟ ರಾಹುಲ್ ಬೋಸ್ ಮಾಡುವುದು ಖಚಿತವಾಗಿದೆ.

ಆ ಸಿನಿಮಾಗೆ ಕೆಲಸ ಮಾಡಿದ್ದ ಸಿನಿಮಾಟೋಗ್ರಾಫರ್‌ ನವೀನ್‌ ಕುಮಾರ್ ಐ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ಮಾಸ್ ಟ್ರಾಕ್ಸ್ ಇರುತ್ತೆ. ”ಮಫ್ತಿ’ ಸಿನಿಮಾದಲ್ಲಿದ್ದ ವಿನಯ್‌ ಕೃಷ್ಣಸ್ವಾಮಿ, ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ, ದೇವರಾಜ್‌ ಸೇರಿದಂತೆ ಹಲವು ಕಲಾವಿದರು ಇದರಲ್ಲಿಯೂ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಇದೆ.ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗುತ್ತದೆ.ವೇದ ಸಿನಿಮಾ ನಂತರ ಶಿವರಾಜ್ ಕುಮಾರ್ ಬ್ಯಾನರ್ ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿತ್ತು. ‘ಭೈರತಿ ರಣಗಲ್’ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು.

ನಿರ್ದೇಶಕ ನರ್ತನ್, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಹಲವರು ಮುಹೂರ್ತ ಸಮಾರಂಭ ಯಶಸ್ವಿಯಾಯಿತು.

ಭೈರತಿ ರಣಗಲ್‌ನಲ್ಲಿ 26 ವರ್ಷದ ಯುವಕನಾಗಿ ಶಿವಣ್ಣಕಾಣಿಸಿಕೊಳ್ಳುತ್ತಾರೆ.ಅಭಿಮಾನಿಗಳು ಈಗಾಗಲೇ ‘ಘೋಷ್ಟ್’ ನಲ್ಲಿ ಶಿವಣ್ಣನ ಗೆಟಪ್ ನೋಡಿ ಕಂಗಲಾಗಿದ್ದರು.ಮತ್ತೊಮ್ಮೆ ಕುತೂಹಲ ಹೆಚ್ಚಿಸಿದ್ದಾರೆ ನರ್ತನ್.

Leave a comment