‘ಉಪಾಧ್ಯಕ್ಷ’ನ ಆಟ ಜೋರಾಗಿದೆ

ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಉಪಾಧ್ಯಕ್ಷ ಟ್ರೇಲರ್ ಬಿಡುಗಡೆ ಮಾಡಿ ಬೆನ್ನು ತಟ್ಟಿದ್ದರು. ಸ್ಟಾರ್ ಹೀರೋಗಳ ಜತೆಗೆ ಕಾಮಿಡಿಯನ್ಯಾಗಿ ಸೈ ಅನಿಸಿಕೊಂಡಿದ್ದ ಚಿಕ್ಕು ಈಗ ಹೀರೊ ಆಗಿ ‘ಉಪಾಧ್ಯಕ್ಷ’ ಚಿತ್ರ ಮಾಡಿದ್ದಾರೆ. ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ನಿರ್ಮಿಸಿರುವ ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಉಪಾಧ್ಯಕ್ಷ ನಿಗೆ ಸ್ಟಾರ್ ನಟರ ಸಾಥ್ ಜೋರಾಗಿ ಇದೆ. ಮೊದಲಿಗೆ ದರ್ಶನ್,ಧ್ರುವ ಸರ್ಜಾ,ಸುದೀಪ್, ರಶ್ಮಿಕಾ ಮಂದಣ್ಣ ಶುಭಕೋರಿದ್ದರು.

ಈವರೆಗೂ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿರುವ ಚಿಕ್ಕಣ್ಣ ನಾಯಕನಾಗಿ ಇದು ಮೊದಲ ಚಿತ್ರ. ಶಿವಣ್ಣ ಅವರು , ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ. ನನ್ನ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಎಂದು ಹೊಗಳಿದ್ದರು. ಅಧ್ಯಕ್ಷ ಚಿತ್ರದ ಸೀಕ್ವೆಲ್ ಆಗಿರುವ ಉಪಾಧ್ಯಕ್ಷ ಚಿತ್ರ ಇದೆ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿ ಕಾಮಿಡಿ ಎಂಟರ್ಟೈನರ್ ಆಗಿ ಹೊರಹೊಮ್ಮಿದೆ.

ಸ್ಟಾರ್ ಕಾಸ್ಟ್:
.ಸಾಧುಕೋಕಿಲ, ರವಿಶಂಕರ್ ,ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿ ಮಲೈಕಾ ವಸುಪಾಲ ನಾಯಕಿಯಾಗಿ ನಟಿಸಿದ್ದಾರೆ.

ಇದೊಂದು ಪಕ್ಕಾ ಮನೋರಂಜನಾ ಚಿತ್ರ.ಈಗಾಗಲೇ ಟೀಸರ್ ಹಾಗೂ 2 ಹಾಡುಗಳು ಹಿಟ್ ಆಗುವ ಮೂಲಕ ಅರ್ಜುನ್ ಜನ್ಯ ಟ್ಯೂನ್ ಮತ್ತೆ ವರ್ಕೌಟ್ ಆಗಿ ಜನರ ಮನ ಗೆದ್ದಿತು. ಇದೊಂದು ಪಕ್ಕಾ ಮನೋರಂಜನಾ ಚಿತ್ರ. ಅಧ್ಯಕ್ಷ ಚಿತ್ರದ ಸೀಕ್ವೆಲ್ ಆಗಿರುವ ಉಪಾಧ್ಯಕ್ಷ ಚಿತ್ರ ಇದೆ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿದೆ.

ಪ್ರೇಕ್ಷಕ ಪ್ರಭು ಕಾಮಿಡಿ ಚಿಕ್ಕಣ್ಣನ ನಾಯಕನ ನಟನೆಗೆ ಜೈಕಾರ ಹಾಕಿ ಸ್ವಾಗತ ಕೋರಿದ್ದಾರೆ. ಇದರೊಂದಿಗೆ ನಮ್ಮ ಚಿಕ್ಕು ನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾನೆ ಎನ್ನುತ್ತಿದೆ ‘ಸಿನಿ ದುನಿಯಾ’

Leave a comment