ಹನುಮಾನ್ ಗೆ ಜೈ ಎಂದ ಟಾಲಿವುಡ್🚩-



ಜನವರಿ 12 ರಂದು ತೆಲಗು ಸಿನಿಪ್ರಿಯರಿಗೆ ಸಿನಿ ಹಬ್ಬ ಎಂದರೆ ತಪ್ಪಾಗುವುದಿಲ್ಲ 2024ರಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿತ್ತಿದೆ. ಮಹೇಶ್ ಬಾಬು “ಗುಂಟೂರ್ ಖಾರಮ್”,ನಾಗಾರ್ಜುನ್ ನಟನೆಯ “ನಾ ಸಾಮಿ ರಂಗ” ಹಾಗೂ ಯುವ ನಾಯಕ ನಟ ತೇಜ ಸಜ್ಜರವರ “ಹನುಮಾನ್” ತೆರೆಕಂಡವು ಆದರೆ ಹನುಮಾನ್ ಎದುರು ಬೇರೆಲ್ಲಾ ಚಿತ್ರಗಳು ಪೈಪೋಟಿ ಮಾಡಲಾಗಲಿಲ್ಲ, ಟಾಲಿವುಡ್ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರಕ್ಕೆ ಜನ ಜೈಕಾರ ಹಾಕಿದ್ದಾರೆ. ನಿರಂಜನರೆಡ್ಡಿ ಕಂದಗಟ್ಲ ನಿರ್ಮಾಣ ಮಾಡಿರುವ ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಹನುಮಾನ್ ತಯಾರಾಗಿದ್ದು 25 ಕೋಟಿ ಬಂಡವಾಳದಲ್ಲಿ ಮುಡಿ ಬಂದಿರೋ ಚಿತ್ರ ಇದಾಗಿದೆ .

ಚಿತ್ರಕ್ಕೆ ಅನುದೀಪ್ ದೇವ್ , ಗೌರಹರಿ ಮತ್ತು ಕೃಷ್ಣ ಸೌರಭ್ ಸಂಗೀತ ಸಂಯೋಜಿಸಿದ್ದಾರೆ , ಆಡಿಯೋ ಹಕ್ಕುಗಳನ್ನು ಟಿಪ್ಸ್ ಇಂಡಸ್ಟ್ರೀಸ್ ಖರೀದಿಸಿದೆ. ದಾಶರಧಿ ಶಿವೇಂದ್ರ ಛಾಯಾಗ್ರಹಣವನ್ನು ಮತ್ತು ಸಂಕಲನವನ್ನು ಸಾಯಿ ರವರು ಮಾಡುವ ಮೂಲಕ ಸಿನೆಮಾಗೆ ಪವರ್ ನೀಡಿದ್ದಾರೆ. 158 ಮಿನಿಟ್ ಇರುವ ಸಿನಿಮಾದಲ್ಲಿ.
ತೇಜ ಸಜ್ಜ ಮುಖ್ಯ ಭೂಮಿಕೆಯಲ್ಲಿ ಹಾಗೂ ಇನ್ನಿತರ ಪಾತ್ರಗಳಲ್ಲಿ
ಅಮೃತ ಅಯ್ಯರ್
ವರಲಕ್ಷ್ಮಿ ಶರತ್‌ಕುಮಾರ್
ವಿನಯ್ ರೈ ನಟಿಸಿದ್ದಾರೆ.


ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ ಸೂಪರ್ ಸ್ಟಾರ್ಸ್ ಸಿನಿಮಗಳೆದುರು. ತಮಿಳು , ಮಲಯಾಳಂ , ಕನ್ನಡ , ಹಿಂದಿ , ಮರಾಠಿ , ಇಂಗ್ಲೀಷ್ , ಸ್ಪ್ಯಾನಿಷ್ , ಕೊರಿಯನ್ , ಜಪಾನೀಸ್ ಮತ್ತು ಚೈನೀಸ್ ಭಾಷೆಗಳ ಡಬ್ಬಿಂಗ್ ಆವೃತ್ತಿಗಳೊಂದಿಗೆ 12 ಜನವರಿ 2024 ರಂದು ತೆಲುಗಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಪಡೆದಿದೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.


ಈ ಸಿನಿಮಾ ನಿಜಾಮ್ ಪ್ರದೇಶದಲ್ಲಿ 7.15 ಕೋಟಿ, ಸೇಡಂನಲ್ಲಿ 4 ಕೋಟಿ, ಆಂಧ್ರದಲ್ಲಿ 9.50 ಕೋಟಿ, ಎಪಿ ತೆಲಂಗಾಣದಲ್ಲಿ 20.65 ಕೋಟಿ, ಕರ್ನಾಟಕ, ಉಳಿದ ಭಾಗದಲ್ಲಿ 2 ಕೋಟಿ, ಸಾಗರೋತ್ತರವಾಗಿ 4 ಕೋಟಿ, ಒಟ್ಟಾರೆ ವಿಶ್ವದಾದ್ಯಂತ ಒಟ್ಟು 26.65 ಕೋಟಿ ಗಳಿಸುವ ಮೂಲಕ ಹಿಟ್ ಆಗಿ ಹೊರಬಂದಿದೆ. ಪಕ್ಕ ಪೈಸಾ ವಸೂಲ್ ಮಾಡಿ ಮುನ್ನುಗ್ಗುತ್ತಿದೆ. ಚಿತ್ರದ OTT ರೈಟ್ಸ್ Zee ಕಂಪನಿಯು ಈ ಚಿತ್ರದ ಒಟ್ಟು ನಾನ್-ಥಿಯೇಟ್ರಿಕಲ್ ಹಕ್ಕುಗಳನ್ನು ಒಟ್ಟಾಗಿ ಖರೀದಿಸಿದೆ.

ನಾನ್ ಥೀಯೇಟ್ರಿಕಲ್ ಬ್ಯುಸಿನೆಸ್ನಲ್ಲಿಯೂ ಕೊಳ್ಳೆ ಹೊಡೆದಿದೆ. Zee ಕಾರ್ಪೊರೇಷನ್ Zee ತೆಲುಗು, Zee ಸಿನಿಮಾ OTT Zee 5 ಹನುಮಾನ್ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಚಲನಚಿತ್ರವು ಬಿಡುಗಡೆಯಾದ 60 ದಿನಗಳ ನಂತರದಲ್ಲಿ OTT ಗೆ ಎಂಟ್ರಿ ಕೊಡಲಿದೆ ಎಂಬ ಮಾಹಿತಿ ಇದೆ. ಈ ಚಿತ್ರಕ್ಕೆ ರವಿತೇಜ ಧ್ವನಿ ನೀಡಿರುವುದು ವಿಶೇಷ.


ಹನುಮಂತನನ್ನು ತೋರಿಸಿದ ರೀತಿ ವಿಶೇಷವಾಗಿ ಆಕರ್ಷಕವಾಗಿತ್ತು. ರಾಮನ ಜನ್ಮಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಪೂರ್ಣಗೊಂಡು ಪೂಜೆಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಸಿನಿಮಾ ಬರುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಪಕ್ಕ ಡಿವೊಷನಲ್ ಫ್ಯಾಮಿಲಿ ಎಂಟರ್ಟೈನೇರ್.

Leave a comment