ಕನ್ನಡ ಚಿತ್ರರಂಗದ ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ವಿನೋದ್ ಪ್ರಭಾಕರ್ ರವರ ನಟನೆ, ಚಿತ್ರದಲ್ಲಿನ ಸಾಹಸ ದೃಶ್ಯಗಳು ಹಾಗೂ ಬ್ಯಾಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿವೆ.
ತಮ್ಮ ವಿಭಿನ್ನ ಶೈಲಿಯ ನಟನೆ, ಮ್ಯಾನರಿಸಮ್, ತಂದೆಯನ್ನು ಹೋಲುವ ಧ್ವನಿ ಹೊಂದಿರುವ ವಿನೋದ್ ಪ್ರಭಾಕರ್ ರವರು ಈ ಟೀಸರ್ ನ ಮೂಲಕ ಮತ್ತೊಮ್ಮೆ ಭರವಸೆಯನ್ನು ಮೂಡಿಸಿದ್ದಾರೆ. ನವಗ್ರಹ, ಟೈಸನ್, ರಾಬರ್ಟ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ವಿನೋದ್ ಪ್ರಭಾಕರ್ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.
ಚಿರಂಜೀವಿ ಸರ್ಜಾ ನಟನೆಯ “ಖಾಕಿ” ಚಿತ್ರ ನಿರ್ದೇಶಿಸಿದ್ದ ನವೀನ್ ರೆಡ್ಡಿ ಬಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 1980ರಲ್ಲಿ ನಡೆಯುವ ಕಥೆ ಇದಾಗಿದ್ದು ಪ್ರೇಕ್ಷಕರನ್ನು 80ರ ದಶಕಕ್ಕೆ ಕೊಂಡೊಯ್ಯುವ ಬಗ್ಗೆ ಟೀಸರ್ ನಲ್ಲಿ ತೋರಿಸಲಾಗಿದೆ. ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದ್ದು ಮರಿ ಟೈಗರ್ ಫೈಟಿಂಗ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ವಿಶೇಷ ಪಾತ್ರದಲ್ಲಿ ಶ್ರೀನಗರಕಿಟ್ಟಿ:- ಮಾದೇವ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ರವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವಿನೋದ್ ಪ್ರಭಾಕರ್ ಹಾಗೂ ಶ್ರೀನಗರಕಿಟ್ಟಿ ಒಟ್ಟಿಗೆ ನಟಿಸುತ್ತಿದ್ದಾರೆ. ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.
ರಾಬರ್ಟ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ರವರ ಜೊತೆ ನಟಿಸಿದ್ದ ನಟಿ ಸೋನಲ್ ಮೊಂತೇರೊ ಈ ಚಿತ್ರಕ್ಕೂ ನಾಯಕನಟಿಯಾಗಿದ್ದಾರೆ.
ಚಿತ್ರದಲ್ಲಿ ವಿನೋದ್ ಪ್ರಭಾಕರ್,ಸೋನಲ್ ಮೊಂತೇರೊ, ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್, ಶೃತಿ, ಬಾಲರಾಜ್ ವಾಡಿ, ಕಾಕ್ರೋಚ್ ಸುಧೀರ್, ಮೈಕೋ ನಾಗರಾಜ್ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ನವೀನ್ ರೆಡ್ಡಿ ಬಿ ನಿರ್ದೇಶನದ ಈ ಚಿತ್ರಕ್ಕೆ ಪ್ರದ್ಯೋತ್ತಾನ್ ರವರು ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಬಾಲಕೃಷ್ಣ ತೋಟ ರವರ ಛಾಯಾಗ್ರಹಣವಿದ್ದು ವಿಜಯ್ ಎಂ ಕುಮಾರ್ ರವರ ಸಂಕಲನವಿದೆ. ಆರ್ ಕೇಶವ ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.