ಕನ್ನಡ ಚಿತ್ರರಂಗದ ತಮ್ಮ ಸುದೀರ್ಘ ಪಯಣದಲ್ಲಿ ಅಭೂತಪೂರ್ವ ಯಶಸ್ಸುಗಳನ್ನು ಕೊಟ್ಟ ನಿರ್ದೇಶಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ರವರು ಹಲವಾರು ವರ್ಷಗಳ ನಂತರ “5D” ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ . ಇತ್ತೀಚಿನ ವರ್ಷಗಳಲ್ಲಿ ನಿರ್ದೇಶನದಿಂದ ದೂರ ಉಳಿದಿದ್ದ ಎಸ್ ನಾರಾಯಣ್ ರವರು ಈ ಬಾರಿ ತಮ್ಮ ರೆಗ್ಯುಲರ್ ಜಾನರ್ ಗಳನ್ನು ಬಿಟ್ಟು ವಿಭಿನ್ನ ಚಿತ್ರಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಎಸ್ ನಾರಾಯಣ್ ಗೆ 50, ಆದಿತ್ಯಗೆ 25 ನೇ ಸಿನಿಮಾ :-
ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರ ಜೊತೆ ಸಿನಿಮಾ ಮಾಡಿ ಯಶಸ್ವಿಯಾಗಿರುವ ಎಸ್ ನಾರಾಯಣ್ ಮೊದಲ ಬಾರಿಗೆ ನಟ ಆದಿತ್ಯರವರಿಗೆ “5D” ಚಿತ್ರದ ಮೂಲಕ ಆಕ್ಷನ್ ಕಟ್ ಹೇಳಿದ್ದಾರೆ. ಎಸ್ ನಾರಾಯಣ್ ನಿರ್ದೇಶನದ 50ನೇ ಸಿನಿಮಾ ಇದಾಗಿದ್ದು ನಿರೀಕ್ಷೆ ಹೆಚ್ಚಾಗಿದೆ.
ಡೆಡ್ಲಿ ಸೋಮ, ಎದೆಗಾರಿಕೆಯಂತಹ ಚಿತ್ರಗಳ ಮೂಲಕ ಖ್ಯಾತಿಯನ್ನು ಗಳಿಸಿದ್ದ ನಟ ಆದಿತ್ಯರವರಿಗೆ ಇದು 25ನೇ ಸಿನಿಮಾ. ಇವರಿಬ್ಬರ ಕಾಂಬಿನೇಷನ್ ಸಹಜವಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಆದಿತ್ಯಾಗೆ ನಾಯಕಿಯಾಗಿ ನಟಿ ಅಧಿತಿ ಪ್ರಭುದೇವ ನಟಿಸಿದ್ದು ಇದೊಂದು ಬ್ಲಡ್ ಮಾಫಿಯಾ ಹಾಗೂ ಮರ್ಡರ್ ಮಿಸ್ಟರಿಯನ್ನು ಒಳಗೊಂಡ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದೆ. ಈಗಾಗಲೇ ಚಿತ್ರದ ಟೀಸರ್ ಜೆಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಟ ಆದಿತ್ಯ, ಅಧಿತಿ ಪ್ರಭುದೇವ, ಎಸ್ ನಾರಾಯಣ್, ಜ್ಯೋತಿ ರೈ, ರಾಜೇಶ್ ಎಸ್ ರಾವ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಎಸ್ ನಾರಾಯಣರವರ ಚಿತ್ರಕಥೆ-ನಿರ್ದೇಶನ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಇದೆ. ಕುಮಾರ್ ಗೌಡ ರವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶಿವು ಯಾದವ್ ರವರ ಸಂಕಲನವಿದೆ. ಡಿಫೆರೆಂಟ್ ಡ್ಯಾನಿ ರವರ ಸಾಹಸವಿದ್ದು, ಧರ್ಮ ವಿಶ್ ರವರ ಹಿನ್ನೆಲೆ ಸಂಗೀತವಿದೆ.
ಒನ್ ಟು ಹಂಡ್ರೆಡ್ ಬ್ಯಾನರ್ ನಡಿಯಲ್ಲಿ ಸ್ವಾತಿ ಕುಮಾರ್ ನಿರ್ಮಿಸಿರುವ ಈ ಚಿತ್ರ ಫೆಬ್ರುವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.