ಚಾಲೆಂಜಿಂಗ್ ಸ್ಟಾರ್,ಸ್ಯಾಂಡಲ್ ವುಡ್ ದಾಸ, ಬಾಕ್ಸ್ ಆಫೀಸ್ ಸುಲ್ತಾನ್, ಈ ಎಲ್ಲಾ ಬಿರುದುಗಳ ಒಡೆಯ ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು.
ಮೊದಲ ದಿನ ಮರೆಯಾದೆ ಮಹಾಪುರ ಹರಿಸಿದ ಚಿತ್ರರಂಗ, ಎರಡನೇ ದಿನಕ್ಕೆ ಕೂರುವ ಅಸನವನ್ನೇ ಒದ್ದಿದ್ದ ದಿನಗಳು ಉಂಟು ಆದರೆ ಎಲ್ಲವನ್ನು ಮೀರಿ ಕನ್ನಡ ಚಿತ್ರರಂಗದ ನಂಬರ್ 1 ನಟನಾಗಿ ಕನ್ನಡ ಭಾಷೆ ,ನೆಲೆ ,ಜಲಗಳ ವಿಷಯಗಳಿಗೆ ಹೆಚ್ಚು ಮಹತ್ವನೀಡುವ ನಾಯಕರಾಗಿ ರಾರಾಜಿಸುತ್ತಿದ್ದಾರೆ.
1990 ರಲ್ಲಿ ಚಿತ್ರರಂಗ ಪ್ರವೇಶಿದ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು.2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು.ಹೇಮಂತ್ ಕುಮಾರ್ ಹೆಸರಿನ ದರ್ಶನ್ ೧೬ ಫೆಬ್ರವರಿ ೧೯೭೭ (ವಯಸ್ಸು ೪೬)
ಪೊನ್ನಂಪೇಟ್, ಕೊಡಗು, ಕರ್ನಾಟಕದಲ್ಲಿ ಜನಿಸಿದರು.ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ ಫೆಬ್ರುವರಿ ೧೬ ೧೯೭೭ ಜನಿಸಿದರು.ತಮ್ಮದಿನಕರ್ ತೂಗುದೀಪ್ ಹಾಗೂ ವಿಜಯ್ ಲಕ್ಷ್ಮಿ ಯವರೊಂದಿಗೆ 2003ರಲ್ಲಿ ವಿವಾಹವಾದರು ದಂಪತಿಗಳಾದ ದರ್ಶನ್ ವಿಜಯಲಕ್ಷ್ಮಿಯ ಮುದ್ದಿನ ಮಗ ವಿನೀಶ್.
ದರ್ಶನ್ ಅವರಿಗೆ ಕೃಷಿ ಬಹಳ ಅಚ್ಚುಮೆಚ್ಚು. ಅವರು ಪಾರ್ಮ್ ಹೌಸ್‌ನಲ್ಲಿ ಹಸು, ಕುದುರೆ ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆ ಅವರೆ ಕುದ್ದು ಮಾಡುತ್ತಾರೆ. ಇತ್ತೀಚಿಗೆ ಅವರು ಸುಮಾರು 50 ಎಕರೆ ಜಮೀನಿನಲ್ಲಿ ಅಧಿಕ ಲಾಭ ತರುವ ಕ್ಯಾಸನೂರು ನಾಟಿ ಅಡಿಕೆ ತಳಿಯ ತೋಟ ಮಾಡಿದ್ದಾರೆ. ಇತ್ತೀಚೆಗೆ ಅಧಿಕ ಸಮಯ ಇದೇ ತೋಟದಲ್ಲಿ ಕಳೆಯುತ್ತಾರೆ. ದರ್ಶನ್ ಅವರ ಅಡಿಕೆ ತೋಟ ನೋಡಲು ಬಹಳಷ್ಟು ಅಭಿಮಾನಿಗಳು ಇಲ್ಲಿಗೆ ಬರುತ್ತಾರೆ.
ದರ್ಶನ್ ನಟನೆಯ ಸಿನಿಮಾಗಳು:ಮೆಜೆಸ್ಟಿಕ್,ಧ್ರುವ,ನಿನಗೋಸ್ಕರ,ಕಿಟ್ಟಿ(2002),ಕರಿಯ,ಲಾಲಿಹಾಡು,ನೀನಂದ್ರೆ ಇಷ್ಟ,ಲಂಕೇಶ್ ಪತ್ರಿಕೆ,ನನ್ನ ಪ್ರೀತಿಯ ರಾಮು,ದಾಸ,ಅಣ್ಣಾವ್ರು(2003),ಧರ್ಮ,ದರ್ಶನ್,ಭಗವಾನ್,ಕಲಾಸಿಪಾಳ್ಯ,ಸರ್ದಾರ(2004),ಅಯ್ಯ,ಸ್ವಾಮಿ,ಶಾಸ್ತ್ರಿ(2005),ಮಂಡ್ಯ,ಸುಂಟರಗಾಳಿ,ದತ್ತ,ತಂಗಿಗಾಗಿ(2006),ಭೂಪತಿ,ಅನಾಥರು,ಸ್ನೇಹಾನಾ ಪ್ರೀತಿನಾ,ಈ ಬಂಧನ(2007),ಗಜ,ಇಂದ್ರ,ಅರ್ಜುನ್,ನವಗ್ರಹ(2008),ಯೋಧ,ಅಭಯ್(2009),ಶೌರ್ಯ ,ಪೋರ್ಕಿ(2010),ಬಾಸ್, ಪ್ರಿನ್ಸ್, ಸಾರಥಿ,(2011),ಚಿಂಗಾರಿ,ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (2012),ಬುಲ್ ಬುಲ್, ಬೃಂದಾವನ(2013),ಐರಾವತ(2015),ವಿರಾಟ್,ಜಗ್ಗುದಾದ(2016)ಚಕ್ರವರ್ತಿ,ತಾರಕ್(2017),ಕುರುಕ್ಷೇತ್ರ,ಯಜಮಾನ,ಒಡೆಯ(2019),ರಾಬರ್ಟ್(2021),ಕ್ರಾಂತಿ(2023) ದರ್ಶನ್ ಅಭಿನಯಸಿರುವ ಚಿತ್ರಗಳು ಮತ್ತು ಬಿಡುಗಡೆಯಾದ ವರ್ಷವಾಗಿದೆ.2023ರಲ್ಲಿ ಬಿಡುಗಡೆಯಾದ ‘ಕಾಟೇರ’ ಇತಿಹಾಸ ಸೃಷ್ಟಿಸಿದ ಕನ್ನಡಿಗರ ಹೆಮ್ಮೆಯ ಸಿನಿಮಾ ನಾಯಕರು ಇವರೇ 200ಕೋಟಿಗೂ ಹೆಚ್ಚು ಕನ್ನಡ ಒಂದೇ ಭಾಷೆಯಲ್ಲಿ ಬಿಡುಗಡೆಯಾಗಿಯೇ ಈ ಮೈಲುಗಲ್ಲು ಸೃಷ್ಟಿಸಿದೆ.ಅಷ್ಟೇ ಅಲ್ಲದೆ ಅರಸು ,ದೇವರಮಗ,ಈ ಬಂಧನ, ಅಗ್ರಜ,ಗರಡಿ,ಚೌಕ ಸಿನಿಮಾದಲ್ಲಿಯು ಅಥಿತಿ ಪಾತ್ರಗಳಲ್ಲಿ ನಮ್ಮ ತೂಗುದೀಪ ನಟಿಸಿದ್ದಾರೆ.
ಮುಂದಿನ ದಿನಗಳಲ್ಲಿ ಗಂಡುಗಲಿ ಮದಕರಿನಾಯಕ,ಡೆವಿಲ್,ಹಾಗೂ ಸಿಂಧೂರಿ ಲಕ್ಷ್ಮಣ ಚಿತ್ರಗಳು ತೆರೆಗೆ ಬರುವುದು ಬಾಕಿಇದೆ.
ತಂದೆ ಖಳ ನಟನಾಗಿದ್ದರು ತಂದೆಯನ್ನು ಮೀರಿಸುವಂತೆ ಕನ್ನಡ ಚಿತ್ರರಂಗದಲ್ಲಿ ಶಿಖರದಂತೆ ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ಮನೆದೀಪ ದರ್ಶನ್ ತೂಗುದೀಪ.