ಪ್ಯಾನ್-ಇಂಡಿಯಾ ಚಿತ್ರಗಳ ಅವಳಿ ಜೋರಾಗಿದ್ದು. ಸಲಾರ್, ಕೆಜಿಫ್, ಅನಿಮಲ್,ಆರ್. ಆರ್. ಆರ್ ,ಲಿಯೋ ಸಿನೆಮಾ ಅಬ್ಬರಿಸಿ ಕಲೆಕ್ಷನ್ ವಿಷಯದಲ್ಲಿಯೂ ಊಹೆಗೂ ಮೀರಿ ಹಣ ಗಳಿಸಿವೆ. ಇಂಡಿಯನ್ ಮೂವಿ ಪ್ರಾಬಲ್ಯತೆ ಮೆರೆದಿವೆ. ಅದೆಲ್ಲದರ ಜೊತೆ ಇಲ್ಲೊಂದು ಸಿನೆಮಾ ಬರೋಬರಿ 38 ಭಾಷೆಯಲ್ಲಿ ಬಿಡುಗಡೆಗೆ ರೆಡಿ ಆಗುತ್ತಿದೆ. ದೇಶ ಅಲ್ಲ ಇಡಿ ಪ್ರಪಂಚವೇ ಇಂಡಿಯಾ ಸಿನೆಮಾವನ್ನು ತಿರುಗಿ ನೋಡುವ ಹಾಗೆ ಮಾಡುವ ಎಲ್ಲ ಸಿದ್ಧತೆ ಆಗಿದೆ.
ಬಾಹುಬಲಿಯ ಯಶಸ್ಸಿನ ನಂತರ, ದಕ್ಷಿಣದ ಭಾರತದ ಚಲನಚಿತ್ರ ನಿರ್ಮಾಪಕರು ಎಲ್ಲಾ ಪ್ರೇಕ್ಷಕರ ಮನ ರಂಜಿಸುವ ಸಲುವಾಗಿ ತಮ್ಮ ನೆಲೆ ಸೊಗಡಿನ ಚಲನಚಿತ್ರಗಳನ್ನು ನಿರ್ಮಿಸಿ, ಹಿಂದಿ ಭಾಷೆಯ ಸಿನೆಮಾದವರಿಗಿಂತ ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಚಲನಚಿತ್ರಗಳು ಸಾಗರದಚೆಯ ಎಲ್ಲಾ ಮಾರುಕಟ್ಟೆಗಳನ್ನು ಮುಟ್ಟುತ್ತಿವೆ. ದಕ್ಷಿಣ ಭಾರತ ವಿಭಿನ್ನವಾದ ಚಿತ್ರವನ್ನು ಕೊಡಲು, ಹೊಸ ರೀತಿಯ ಕಥೆಗಳು ಹೊಸ ರೀತಿಯ ಚಿತ್ರಗಳನ್ನು ಜನರಿಗೆ ಕೊಡುವಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.
38 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಅತಿ ದೊಡ್ಡ ಪ್ಯಾನ್-ಇಂಡಿಯಾ ಚಿತ್ರ ಕಂಗುವ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತಮಿಳು ನಟ ಸೂರ್ಯ ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ತಮಿಳಿನಲ್ಲಿ K.E ಜ್ಞಾನವೇಲ್ ರಾಜಾ, V.ವಂಶಿ ಕೃಷ್ಣ ರೆಡ್ಡಿ ,ಪ್ರಮೋದ್ ಉಪ್ಪಳಪತಿ ನಿರ್ಮಾಣ ಮಾಡುತ್ತಿದ್ದು.
ವಿರಂ,ವೇದಲಾಮ್,ವಿಶ್ವಾಸಮ್, ಶೌರ್ಯಮ್ ಅಂತಹ ಹಿಟ್ ನೀಡಿರುವ ಡೈರೆಕ್ಟರ್ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿದೆ. 300 ರಿಂದ 350 ಕೋಟಿ ಬಜೆಟ್ ಅಲ್ಲಿ ತಯಾರಾಗುತ್ತಿರುವ ಚಿತ್ರ ಇದಾಗಿದೆ.
ನಟ ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿಯವರ ತಮಿಳು ಚೊಚ್ಚಲ ಚಿತ್ರವಾಗಿದೆ ಮತ್ತು ನಟರಾಜನ್ ಸುಬ್ರಮಣ್ಯಂ, ಜಗಪತಿ ಬಾಬು, ಆನಂದರಾಜ್, ರವಿ ರಾಘವೇಂದ್ರ, ಕೆ.ಎಸ್. ರವಿಕುಮಾರ್ ಮತ್ತು ಬಿ.ಎಸ್.ಅವಿನಾಶ್ ಸ್ಟಾರ್ ಕಾಸ್ಟ್ ಹೊಂದಿದೆ ಎನ್ನಲಾಗುತ್ತಿದೆ.2024 ರ ಅಂತ್ಯಕ್ಕೆ ಸಿನೆಮಾ ಪ್ರೇಕ್ಷಕರ ಎದುರು ಬರಲಿದೆ ಆದರೆ ನಿರ್ದಿಷ್ಟವಾಗಿ ಯಾವುದೇ ದಿನವನ್ನು ಖಚಿತ ಪಡಿಸಿಲ್ಲ ಈಗಾಗಲೇ ಟೀಸರ್ ನೋಡಿ ಹುಬ್ಬೇರಿಸಿರುವ ಕಂಗುವ ಕಣ್ಣಮುಂದೆ ಬಂದ್ರೆ ಹೊಸ ದಾಖಲೆ ಆಗೋದು ನಿಜ ಎನ್ನುತ್ತಿದೆ ಸಿನಿ ಜಗತ್ತು. ಸೂರ್ಯನ ಅಭಿನಯಕ್ಕೆ ವಿಕ್ರಂ ಚಿತ್ರದ ಝಲಕ್ ಸಾಕಾಗಿದೆ ಅವರ ಅಭಿಮಾನಿಗಳು ರೋಲೆಕ್ಸ್ ಹೊಸ ಅವತರಿಕೆಯನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಕಂಗುವ ಸಿನಿಮಾ ಹೊಸ ದಾಖಲೆ ಮಾಡುವ ಎಲ್ಲಾ ಲಕ್ಷಣಗಳು ಒಂದು ಝಲಕ್ ಅಲ್ಲಿ ನಾವು ಕಾಣಬಹುದು. ಯಾವುದೇ ಒಂದು ಸಣ್ಣ ಮಾಹಿತಿಯನ್ನು ಪ್ರಕಟಿಸದೆ ಇನ್ನೂ ಕುತೂಹಲ ಹೆಚ್ಚಿಸಿರುವುದಂತೂ ನಿಜ.
ಕಂಗುವ ಸಿನಿಮಾ ತಂಡಕ್ಕೆ ಶುಭವಾಗಲಿ – ಸಿನಿಮಾ ಸಂಚಾರ