ಶ್ರಾವಣಿ ಸುಬ್ರಹ್ಮಣ್ಯ ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್. ಬಿಡುಗಡೆಯಾಗಿ ದಶಕ ಕಳೆದಿದೆ ಗೋಲ್ಡನ್ ಸ್ಟಾರ್ ಗಣೇಶ್ ,ಅಮೂಲ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಾಸ್ಯ ಪ್ರೇಮಕಥೆ ಬಿಡುಗಡೆಯಾದ ನಂತರ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲಿ ಸುಮಾರು 12 ಕೋಟಿ ಹಾಗೂ 100 ದಿನ ಪೂರೈಸಿ 31 ಕೋಟಿ ಬಾಚಿಕೊಂಡು 2013 ವರ್ಷದ ಸೂಪರ್ ಹಿಟ್ ಆಯ್ತು.
ಮಂಜು ಸ್ವರಾಜ್ ಅವರು ಬರೆದು ನಿರ್ದೇಶಿಸಿದ ಮತ್ತು ಕೆ. ಎ ಸುರೇಶ್ ಅವರು ತಮ್ಮ ಹೋಮ್ ಪ್ರೊಡಕ್ಷನ್ ಬ್ಯಾನರ್ ಸುರೇಶ್ ಆರ್ಟ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯ ಮೂವಿಯ ಪಾತ್ರಕ್ಕಾಗಿ ಅಮೂಲ್ಯರವರಿಗೆ 61ನೇ ಸಾಲಿನ ಫಿಲಂಫೇರ್ ಅವಾರ್ಡ್ ದೊರೆತಿದೆ. ಗಣೇಶ್ ಅವರಿಗೂ ಹಿಟ್ ಸಾಲಿನಲ್ಲಿ ಇದು ಸೇರಿತು.27 ಡಿಸೆಂಬರ್ 2013 ರಂದು ಬಿಡುಗಡೆಯಾಗಿ ಸಿನಿರಸಿಕರಿಗೆ ಹಾಸ್ಯ ಉಣಬಡಿಸಿತು.
ಚಿತ್ರವು ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಒಳಗೊಂಡಿದ್ದು ಎಲ್ಲ ಹಾಡುಗಳು ಕೇಳುಗರ ಮೈ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು.
ಅದೇ ನೆನಪಿಗಾಗಿ ಒನ್ಸ್ ಮೊರ್ ಶ್ರಾವಣಿ ಸುಬ್ರಹ್ಮಣ್ಯ ಎಂಬ ಟೈಟಲ್ ನಲ್ಲೇ ಮತ್ತೊಮ್ಮೆ ಗೆಲ್ಲುವ ಉತ್ಸಾಹದಲ್ಲಿ ತಂಡ ಮುಂದಾಗಿದೆ. ಹೊಸಬರಿಗೆ ಅವಕಾಶವನ್ನು ನೀಡುವುದಾಗಿ ಘೋಷಿಸಿದ್ದಾರೆ ಸುರೇಶ್ ಅವರು. ಹೊಸ ಪ್ರತಿಭೆಗಳಿಗೆ ನಿಜವಾಗಲೂ ಒಳ್ಳೆಯ ಅವಕಾಶ. ಆಸಕ್ತಿ ಇದ್ದವರು ಪ್ರಯತ್ನಿಸಿ.