ಕಾತರದ ಕಾಟೇರ ಸಿನಿಮಾ ಇಂದು celebrity ಗಳ ಮಡಿಲಿಗೆ.
ದರ್ಶನ್ ಅಭಿನಯದ ವಿಭಿನ್ನ ರೀತಿಯಲ್ಲಿ ಮೂಡಿಬಂದಿರುವ ಒಂದು ಸತ್ಯ ಕಥೆ ಆಧಾರಿತ ಸಿನಿಮಾ ಮಾಸ್ ಮೂವಿಗಳಿಗೆ ಇನ್ನೊಂದು ಹೆಸರೇ ನಮ್ಮ ಡಿ ಬಾಸ್ ಎಂದು ಹೇಳುವ ಅಭಿಮಾನಿಗಳಿಗೆ, ಹಳ್ಳಿ ಸೊಗಡಿನಲ್ಲಿ ಕಾಟೇರ ಪರಭಾಷಿಕರ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತೆ ಮೂಡಿಬಂದಿದೆ. ಮೊದಲ ಫ್ಯಾನ್ಸ್ show ಅಲ್ಲಿ ಅಭಿಮಾನಿಗಳ ಆಸೆಯನ್ನು ದರ್ಶನ್ ಅವರು ನಿರಾಸೆ ಮಾಡಿಲ್ಲ. ಚಿತ್ರ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ನಮ್ಮಲ್ಲಿರುವ ಭಾವನೆಯನ್ನು, ದರ್ಶನ್ ಅವರು ಕಾಟೇರನಾಗಿ ಸಿನಿಮಾ ಉದ್ದಕ್ಕೂ ಒಂದು ಒಳ್ಳೆಯ ವಿಚಾರವನ್ನ ಹೇಳಿ ಅಭಿಮಾನಿಗಳ ಮನಸಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ತರುಣ್ ಸುಧೀರ್ ಕಾಂಬಿನೇಶನ್ ಅಲ್ಲಿ ಈಗಾಗಲೇ ರಾಬರ್ಟ್ ಹಿಟ್ ಕೊಟ್ಟಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ನಾಯಕಿ ಆಗಿ ಹಿರಿಯ ನಟಿ 90 ರ ದಶಕದ ಕನಸಿನ ರಾಣಿ ಮಾಲಾಶ್ರೀ ಸುಪುತ್ರಿಆರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ ಮತ್ತು ಜಗಪತಿಬಾಬು ,ಬಹುಕಾಲದ ನಂತರ ಕುಮಾರ್ ಗೋವಿಂದ್ ಅವರು ನಟಿಸಿದ್ದಾರೆ ಮಾಸ್ ರಸಿಕರಿಗೆ ಹಬ್ಬದೂಟ ಉಣಬಡಿಸಿದೆ ಎನ್ನಲಾಗುತ್ತಿದೆ.
ಸಾಂಗ್, ಟ್ರೇಲರ್ ಹಾಗೂ ಅಡ್ವಾನ್ಸ್ ಬುಕ್ಕಿಂಗ್ ಎಲ್ಲದರಲ್ಲೂ ದಾಖಲೆ ಬರೆದು ಕೊನೆಗೂ ಕಾಟೇರನನ್ನ ಕಣ್ತುಂಬಿಕೊಳ್ಳುವ ಕ್ಷಣ ಬಂದೆ ಬಿಡ್ತು ಕರ್ನಾಟಕದಾದ್ಯಂತ ಎಲ್ಲ ಶೋ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಫ್ಯಾನ್ ಶೋ ನೋಡಿದ ಅಭಿಮಾನಿಗಳು ಡಿಬಾಸ್ ನಟನೆಗೆ ಹುಚ್ಚೇದ್ದೂ ಕುಣಿದಿದ್ದಾರೆ. ಗ್ರಾಮೀಣ ಸೊಗಡಿನ ಕಾಯುವ ರೈತನ ಕಥೆ ಸಿನಿರಸಿಕರಿಗೆ ಕಿಂಚಿತ್ತು ಮೊಸಮಾಡುವಂತಿಲ್ಲ. ಕಾಟೇರನಾ ಬಳಗದ್ಲಲಿ ವಿಭಿನ್ನ ಪಾತ್ರ, ಘಟಾನುಘಟಿ ಕಲಾವಿದರ ಅಭಿನಯಕ್ಕೆ ಶಿಳ್ಳೆ,ಚಪ್ಪಾಳೆ ಚಿತ್ರ ಮಂದಿರದಲ್ಲಿ ಕೇಳಿ ಬರ್ತಿದೆ. ಬಾಕ್ಸ್ ಆಫೀಸ್ ಸುಲ್ತಾನನ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿರುವ ಕನ್ನಡಿಗರು ಇನ್ನೊಂದು ಕಡೆ ಕಲೆಕ್ಷನ್ ಲೆಕ್ಕಾಚಾರದಲ್ಲಿ ಗಾಂಧಿನಗರ ಎದರು ನೋಡುತ್ತಿದೆ.
ಕಾಟೇರನಿಗೆ ಕರುನಾಡೆ ಸಾಥ್ ಕೊಟ್ಟಿದೆ. ದಿನದ 24 ಗಂಟೆಗಳ ಶೋಗಳು ಹೌಸ್ ಫುಲ್ ಆಗಿದೆ. ಪೈಸಾವಸೂಲ್ ಫಿಲ್ಮ್ ಎಲ್ಲರೂ ಥಿಯೇಟರ್ ಗೆ ಬಂದು ನೋಡಬಹುದಾದ ಚಿತ್ರ.